Advertisment

VIDEO: ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೆ ವಿದ್ಯುತ್​ ಕಂಬ ಏರಿದ ಹೆಂಡತಿ.. ಆಮೇಲೇನಾಯ್ತು?

author-image
AS Harshith
Updated On
ನಾಳೆ ಬೆಂಗಳೂರಲ್ಲಿ ವಿದ್ಯುತ್​​ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್​​ ಇರಲ್ವಾ? ಚೆಕ್​ ಮಾಡಿ!
Advertisment
  • ಏಳು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ
  • ಮೂರು ಮಕ್ಕಳ ತಾಯಿಯ ಅಕ್ರಮ ಸಂಬಂಧ ಬಹಿರಂಗ ಪಡಿಸಿದ ಗಂಡ
  • ಅನೈತಿಕ ಸಂಬಂಧ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ.. ಆಮೇಲೆ ಏನಾಯ್ತು?

ನವದೆಹಲಿ: ಅನೈತಿಕ ಸಂಬಂಧ ಬಯಲಾಗಿದ್ದಕ್ಕೆ ತಾಯಿಯೊಬ್ಬಳು ವಿದ್ಯುತ್​ ಕಂಬವನ್ನು ಏರಿದ ಘಟನೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಬೆಳಕಿಗೆ ಬಂದಿದೆ. ಬುಧವಾರದಂದು ಮೂರು ಮಕ್ಕಳ ತಾಯಿ ವಿದ್ಯುತ್​ ಕಂಬ ಏರಿದ್ದು, ದೃಶ್ಯ ಸಮೇತ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Advertisment

ಮಹಿಳೆ ಏಳು ವರ್ಷ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರ ತಾಳಿ ಕಟ್ಟಿದ ಗಂಡನಿಗೆ ತಡವಾಗಿ ಗೊತ್ತಾಗಿದೆ. ಕೊನೆಗೆ ಪತ್ನಿಯ ಅಕ್ರಮ ಸಂಬಂಧವನ್ನು ಬಹಿರಂಗ ಪಡಿಸಿದಂತೆ ಆಕೆ ವಿದ್ಯುತ್​ ಕಂಬ ಏರಿ ಡ್ರಾಮಾ ಮಾಡಿದ್ದಾಳೆ ಎಂದು ಪತಿ ರಾಮ್​ ಗೋವಿಂದ್ ಆರೋಪಿಸಿದ್ದಾರೆ.


">April 3, 2024

ಇದನ್ನೂ ಓದಿ: Exclusive Photos: ಕೊಳವೆ ಬಾವಿಯಿಂದ ಹಿಡಿದು ಸಾವು ಗೆದ್ದ ಸಾತ್ವಿಕನ ಕ್ಷಣ ಕ್ಷಣದ ಫೋಟೋಗಳು ಇಲ್ಲಿವೆ

Advertisment

ಪತಿ ರಾಮ್​ ಗೋವಿಂದ್​​ ಕೂಲಿ ಕಾರ್ಮಿಕನಾಗಿದ್ದು, ಪತ್ನಿ ನೆರೆಯ ಗ್ರಾಮದ ಪುರುಷನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬುದು ಆತನಿಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕೊನೆಗೆ ಮನೆಗೆ ಹಣಕಾಸಿನ ಸಹಾಯಕ್ಕೆ ಇನ್ನೊಬ್ಬ ವ್ಯಕ್ತಿಗೆ ಅವಕಾಶ ನೀಡುವಂತೆ ಮಹಿಳೆ ವಿಲಕ್ಷಣ ಬೇಡಿಕೆ ಇಟ್ಟಿದ್ದಾಳೆ ಎಂದು ಗಂಡ ಆರೋಪಿಸಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೃಶ್ಯದಲ್ಲಿ ಮಹಿಳೆ ವಿದ್ಯುತ್​ ಕಂಬ ಏರಿದ್ದಾಳೆ. ಆದರೆ ಇದನ್ನು ಗಮನಿಸಿದ ಜನರು ಕೆಳಗಿಳಿಯುವಂತೆ ಹೇಳಿದ್ದಾರೆ. ಕೊನೆಗೆ ಆಕೆಯನ್ನು ಕೆಳಗಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment